ಭೌತಶಾಸ್ತ್ರದಲ್ಲಿ, ಆವೇಗ(ಸಂವೇಗ) ಎಂದರೆ ಒಂದು ವಸ್ತುವಿನ ದ್ರವ್ಯರಾಶಿ ಹಾಗೂ ವೇಗದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ಪರಿಮಾಣ ಮತ್ತು ದಿಕ್ಕು ಎರಡನ್ನು ಹೊಂದಿರುತ್ತದೆ. ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು ವೇಗವಾಗಿದ್ದರೆ, ಆವೇಗ (ಸಂವೇಗವು) =. , ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (⋅/). ಒಂದು ಕಾಯದ ಆವೇಗದ ಬದಲಾವಣೆಯ ದರವು ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ ಎರಡನೇ ಚಲನಾ ನಿಯಮ ಹೇಳುತ್ತದೆ. ಸಂವೇಗವು ಅದನ್ನು ಅಳೆಯಲು ಬಳಸಲ್ಪಡುವ ಆಯಾಮ ಚೌಕಟ್ಟನ್ನು ಅವಲಂಭಿಸಿರುತ್ತದೆ. ಸ್ಥಿರವಾಗಿರುವ ಆಯಾಮ ಚೌಕಟ್ಟಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಂವೇಗವು ಸಂರಕ್ಷಿತ ಪರಿಮಾಣವಾಗಿದೆ, ಅಂದರೆ ಒಂದು ಮುಚ್ಚಿದ ವ್ಯವಸ್ಥೆಯಲ್ಲಿ ಒಂದು ವಸ್ತುವು ಬಾಹ್ಯ ಬಲಗಳಿಂದ ಬಾಧಿತವಾಗದಿದ್ದರೆ, ಅದರ ಒಟ್ಟು ರೇಖೀಯ ಸಂವೇಗವು ಬದಲಾಗುವುದಿಲ್ಲ. ಆವೇಗವು ವಿಶೇಷ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ, ಮತ್ತು ಬದಲಾದ ರೂಪದಲ್ಲಿ, ವಿದ್ಯುದ್ಬಲವಿಜ್ಞಾನ (), ಕ್ವಾಂಟಮ್ ಯಂತ್ರಶಾಸ್ತ್ರ ([[ ]]), ಕ್ವಾಂಟಮ್ ಕ್ಷೇತ್ರ ಸಿದ್ಧಾಂತ, ಮತ್ತು ಸಾಮಾನ್ಯ ಸಾಪೇಕ್ಷತೆ ( )ಯಲ್ಲೂ ಸಂರಕ್ಷಿತವಾಗಿರುತ್ತದೆ. ಇದು ದೇಶ ಮತ್ತು ಕಾಲದ ಮೂಲಭೂತ ಸಮ್ಮಿತಿಗಳಲ್ಲಿ ಒಂದಾದ ರೂಪಾಂತರ ಸಮ್ಮಿತಿಯ ಅಭಿವ್ಯಕ್ತಿಯಾಗಿದೆ.